ಸೋಮವಾರ, ಮೇ 18, 2009

ವಿದ್ಯೆ

ಮನುಷ್ಯನಿಗೆ ವಿದ್ಯಾರ್ಜನೆ ಅತ್ಯಗತ್ಯ. ವಿದ್ಯೆಯಿಲ್ಲದವನ ಮುಖ ಹಾಳೂರ ಹದ್ದಿನಂತಿಕ್ಕೂ ಎಂದಿದ್ದಾನೆ ಸರ್ವಜ್ಞ ಕವಿ.
ಮನುಷ್ಯರಾಗಿ ಹುಟ್ಟಿದವರೆಲ್ಲರಿಗೂ ವಿದ್ಯೆ ಬೇಕೇಬೇಕು,ತಂದೆ -ತಾಯಿ ತಮ್ಮ ಮಕ್ಕಳಿಗೆ ವಿದ್ಯೆ-ಬುದ್ದಿ ಕಲಿಸಬೇಕು.

ವಿದ್ಯೆಗಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ . ಧನ ಸಂಪತ್ತು ಖರ್ಚು ಮಾಡಿದಂತೆಲ್ಲ ಸವೆಯುತ್ತದೆ.

ಆದರೆ ವಿದ್ಯೆ ಎಂಬ ಸಂಪತ್ತು ಖರ್ಚು ಮಾಡಿದಷ್ಟೂ ಹೆಚ್ಚುತ್ತದೆ . ಆದ್ದರಿಂದ ಎಲ್ಲರೂ ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಬೇಕು .ವಿದ್ಯೆಯ ಮಹತ್ವ ವಿವರಿಸುವ ಈ ಪುಟ್ಟ ಸುಭಾಷಿತವನ್ನು ಹೇಳಿಕೊಡಬೇಕು .

ವಿದ್ಯಾ ದದಾತಿ ವಿನಯಂ ,ವಿನಯಾದ್ಯಾತಿ ಪಾತ್ರತಂ ಪಾತ್ರತ್ವಾತ್

ಧನಯಾಪ್ನೋತಿ , ಧನಾದ್ದರ್ಮಂ ,ತತಃ ಸುಖಮ್

ಅರ್ಥ ;ವಿದ್ಯೆಯಿಂದ ವಿನಯ, ವಿನಯದಿಂದ ಸಚ್ಹಾರ್ರಿತ್ಯ್ರ, ಸಚ್ಹಾರ್ರಿತ್ರ್ಯದಿಂದ ಧನ ಸಂಪತ್ತು,

ಧನ ಸಂಪತ್ತಿನಿಂದ ದಾನ-ದರ್ಮ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಜೀವನಕ್ಕೆ ಅಗತ್ಯವಾದ

ಸುಖ-ಶಾಂತಿ-ನೆಮ್ಮದಿ-ಸಂತೃಪ್ತಿಯೂ ದೊರಕುತ್ತದೆ. ಆದ್ದರಿಂದ ಇನ್ನಾದರೂ ನಾವೆಲ್ಲ

ನಮ್ಮ ಮಕ್ಕಳನ್ನು ವಿದ್ಯವಂತರನ್ನಾಗಿಸೋಣನಾಗರಿಕ ಸಮಾಜ ನಿರ್ಮಿಸೋಣ.

ಗುರುವಾರ, ಮಾರ್ಚ್ 12, 2009

ಇಂಟರ್ನೆಟ್ ಬಗ್ಗೆ

ಇಂಟರ್ನೆಟ್ ಬಗ್ಗೆ ನಾವು ಹಲವು ವಿಷಯಗಳನ್ನು ಗೂಗಲ್ ನಲ್ಲಿ ತಿಳಿದು ಕೊಂಡಿರುವೆವು .ನಮಗೆ ಈ ಮಾಹಿತಿಗಳನ್ನು ಗುರುಗಳಾದ ಮಿಸ್ಟರ್ ಶಿವಾನಂದ, ಮಿಸ್ಟರ್ ವಿಜಯ್ ,ಮತ್ತು ಮಿಸ್ಟರ್ ವಂಸಿ ಕೃಷ್ಣ ರವರು ತಿಳಿಸಿರುವರು .

ಗುರುವಾರ, ಮಾರ್ಚ್ 5, 2009


ಗಣಪತಿ ನಿನಗೆ ವಂದಿಸುವೆ . ಗಣಪತಿಗೆ ಹಲವು ನಾಮಾಂಕಿತ ಉಂಟು ,ಯಾವುದೆಂದರೆ ಗಣೇಶ ,ವಿನಾಯಕ,ಗಜಮುಖ ಹೇರಂಬ,ಲಂಬೋಧರ ಇನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ .