ಮನುಷ್ಯನಿಗೆ ವಿದ್ಯಾರ್ಜನೆ ಅತ್ಯಗತ್ಯ. ವಿದ್ಯೆಯಿಲ್ಲದವನ ಮುಖ ಹಾಳೂರ ಹದ್ದಿನಂತಿಕ್ಕೂ ಎಂದಿದ್ದಾನೆ ಸರ್ವಜ್ಞ ಕವಿ.ಮನುಷ್ಯರಾಗಿ ಹುಟ್ಟಿದವರೆಲ್ಲರಿಗೂ ವಿದ್ಯೆ ಬೇಕೇಬೇಕು,ತಂದೆ -ತಾಯಿ ತಮ್ಮ ಮಕ್ಕಳಿಗೆ ವಿದ್ಯೆ-ಬುದ್ದಿ ಕಲಿಸಬೇಕು.
ವಿದ್ಯೆಗಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ . ಧನ ಸಂಪತ್ತು ಖರ್ಚು ಮಾಡಿದಂತೆಲ್ಲ ಸವೆಯುತ್ತದೆ.
ಆದರೆ ವಿದ್ಯೆ ಎಂಬ ಸಂಪತ್ತು ಖರ್ಚು ಮಾಡಿದಷ್ಟೂ ಹೆಚ್ಚುತ್ತದೆ . ಆದ್ದರಿಂದ ಎಲ್ಲರೂ ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಬೇಕು .ವಿದ್ಯೆಯ ಮಹತ್ವ ವಿವರಿಸುವ ಈ ಪುಟ್ಟ ಸುಭಾಷಿತವನ್ನು ಹೇಳಿಕೊಡಬೇಕು .
ವಿದ್ಯಾ ದದಾತಿ ವಿನಯಂ ,ವಿನಯಾದ್ಯಾತಿ ಪಾತ್ರತಂ ಪಾತ್ರತ್ವಾತ್
ಧನಯಾಪ್ನೋತಿ , ಧನಾದ್ದರ್ಮಂ ,ತತಃ ಸುಖಮ್
ಅರ್ಥ ;ವಿದ್ಯೆಯಿಂದ ವಿನಯ, ವಿನಯದಿಂದ ಸಚ್ಹಾರ್ರಿತ್ಯ್ರ, ಸಚ್ಹಾರ್ರಿತ್ರ್ಯದಿಂದ ಧನ ಸಂಪತ್ತು,
ಧನ ಸಂಪತ್ತಿನಿಂದ ದಾನ-ದರ್ಮ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಜೀವನಕ್ಕೆ ಅಗತ್ಯವಾದ
ಸುಖ-ಶಾಂತಿ-ನೆಮ್ಮದಿ-ಸಂತೃಪ್ತಿಯೂ ದೊರಕುತ್ತದೆ. ಆದ್ದರಿಂದ ಇನ್ನಾದರೂ ನಾವೆಲ್ಲ
ನಮ್ಮ ಮಕ್ಕಳನ್ನು ವಿದ್ಯವಂತರನ್ನಾಗಿಸೋಣನಾಗರಿಕ ಸಮಾಜ ನಿರ್ಮಿಸೋಣ.